ಗದಗ: ರಾಜ್ಯದಲ್ಲಿ ಚುನಾವಣಾ ಕಾವು ದಿನೆ ದಿನೆ ಏರುತೇತಿದ್ದು ಪಕ್ಷಾಂತರ ಪರ್ವ ಆರಂಭಗೊಂಡಿದೆ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ,ಬಿಜೆಪಿಯಿಂದ ಕಾಂಗ್ರೆಸ್ ಗೆ ವಿವಿಧ ವೇದಿಕೆಯಲ್ಲಿ ಮುಖಂಡರುಗಳ ಸೇರ್ಪಡೆ ಕಾರ್ಯ ಇಂದು ಮುಂದುವರೆದಿದ್ದು ಸಂಸದ ಶಿವುಕುಮಾರ ಉದಾಸಿ ನೇತೃತ್ವದಲ್ಲಿ ವಾರ್ಡ ಸಂಖ್ಯೆ 15 ರ ಕಾಂಗ್ರೆಸ್ ಮುಖಂಡರಾದ ಡಾ.ಸಂತೋಷ ತೋಟಗಂಟಿಮಠ,ಶಿವು ಜಮಖಂಡಿ,ಆನಂದ ತೋಟಗಂಟಿಮಠ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಯಾದರು.
ಇನ್ನೂ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಪಂಚಮಸಾಲಿ ಸಮಾಜದ ಹಿರಿಯರಾದ ನಿಂಗಪ್ಪ ಪಡಗದ ಅವರು ಉದ್ಯಮಿ ವಿಜಯ ಸಂಕೇಶ್ವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.