ಹೊಳೆ-ಆಲೂರು ಸಂತೆಯಲ್ಲಿ  ಮತದಾನ ಜಾಗೃತಿ ಮಾಡಿದ ಗ್ರಾಮ ಪಂಚಾಯತಿ

ಸಮಗ್ರ ಪ್ರಭ ಸುದ್ದಿ
1 Min Read

ಹೊಳೆ ಆಲೂರ : ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದ ಮೇರೆಗೆ SVEEP ಸಮಿತಿ ಹೊಳೆ ಆಲೂರು ಗ್ರಾಮ ಪಂಚಾಯಿತಿಯಿಂದ ಶುಕ್ರವಾರದ ಗ್ರಾಮದ ಸಂತೆ ಯಲ್ಲಿ ಮತದಾನ ಜಾಗೃತಿ ಮಾಡಲಾಯಿತು.

ಹೊಳೆ ಆಲೂರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗ ಸಂತೆಯಲ್ಲಿ ದಿನಸಿ ಅಂಗಡಿ, ಬೇಕರಿ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಹಾಗೂ ಎಲ್ಲಾ ಬೀದಿಬದಿ ವ್ಯಾಪಾರಸ್ಥರ ಬಳಿಗೆ ತೆರಳಿ ಅವರನ್ನು ಕಡ್ಡಾಯವಾಗಿ ಮೇ ಹತ್ತರಂದು ಮತದಾನ ಮಾಡುವಂತೆ ಪ್ರೇರೇಪಿಸಲಾಯಿತು. ಇನ್ನು ವಿಶೇಷವೆಂದರೆ ಸ್ವತಃ ಅಂಗಡಿ ಮಾಲೀಕರು ಗ್ರಾಮ ಪಂಚಾಯಿತಿ SVEEP ಸಮಿತಿಯಿಂದ ತಯಾರಿಸಲಾದ ಬಿತ್ತಿ ಪತ್ರಗಳನ್ನು ತಮ್ಮ ಅಂಗಡಿಗಳಿಗೆ ಅಂಟಿಸಿಕೊಳ್ಳುವ ಮೂಲಕ ಮತದಾನ ಜಾಗೃತಿಯಲ್ಲಿ ಪಾಲ್ಗೊಂಡರು. ರಸ್ತೆ ಬದಿ ವ್ಯಾಪಾರಸ್ಥರು ತಾವು ಮಾರಲು ತಂದಿರುವ ತರಕಾರಿ ದಿನಸಿ ಕಾಳುಕಡಿ ಗಳ ಮಧ್ಯ ಬಿದ್ದಿಪತ್ರಗಳನ್ನು ಅಂಟಿಸಿಕೊಂಡು ಮತದಾನ ಜಾಗೃತಿಗೆ ಸಾತ್ ನೀಡಿದರು. ಸಂತೆಗೆ ಬಂದ ಗ್ರಾಹಕರು ತಮ್ಮ ದ್ವಿಚಕ್ರ ವಾಹನಗಳ ಮೇಲೂ ಮತದಾನ ದಿನಾಂಕ ಹಾಗೂ ಸಮಯ ಒಳಗೊಂಡಿರುವ ಬಿತ್ತಿ ಪತ್ರಗಳನ್ನು ಅಂಟಿಸಿಕೊಂಡು ಗ್ರಾಮ ಪಂಚಾಯತಿಯ SVEEP ಸಮಿತಿ ಸದಸ್ಯರ ಕಾರ್ಯವೈಕರಿಗೆ ಮೆಚ್ಚುಗೆಯಿಂದ ಬೆಂಬಲ ಸೂಚಿಸಿದರು.

ಭಾರತ ದೇಶದಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಅಚ್ಚುಕಟ್ಟಾಗಿ,ಮುಕ್ತ,ನ್ಯಾಯಸಮ್ಮತ ಹಾಗೂ ವ್ಯಾಪಕವಾಗಿ ಚುನಾವಣೆಗಳನ್ನು ಸಂಘಟಿಸುವುದು ಒಂದು ಸವಾಲಿನ ಕೆಲಸ.ಮತದಾರರಲ್ಲಿ ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗ ಹಲವು ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಲೆ ಬಂದಿದೆ.ಆ ಮಾರ್ಗದಲ್ಲಿಯೇ ಹೊಳೆ ಆಲೂರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶಿವನಗೌಡ ಮೆಣಸಗಿ. ಮತದಾರರನ್ನು ಸೆಳೆಯಲು ವಿಭಿನ್ನವಾದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಹಾಗೂ ಎಲ್ಲಾ ಪಂಚಾಯತ ವರ್ಗದವರಿಗೆ ಧನ್ಯವಾದಗಳು

ರವಿ.ಎ.ಎನ್ ಕಾರ್ಯ ನಿರ್ವಾಹಕ ಅಧಿಕಾರಿಗಳು ರೋಣ

Share this Article