ಗಜೇಂದ್ರಗಡ : ಸ್ಥಳೀಯ ಪೋಲಿಸ್ ಠಾಣೆಯ ಪಿ.ಎಸ್.ಐ ರಾಘವೇಂದ್ರ ಎಸ್.ಮತ್ತು ಇಬ್ಬರೂ ಪೇದೆಗಳು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಲಿಖಿತ ದೂರಿನ ಅನ್ವಯ ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ ದಂದೆ ಗಜೇಂದ್ರಗಡದಲ್ಲಿ ಜೊರಾಗಿ ನಡೆದಿದ್ದರಿಂದ ಪ್ರಕರಣ ದಾಖಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗಾಗಿ ೨ ಲಕ್ಷ ಬೇಡಿಕೆಯನ್ನು ಇಟ್ಟಿದ್ದರು.ಪಿರ್ಯಾದಿದಾರು ಮತ್ತು ಪಿ.ಎಸ್.ಐ.೧.೫ ಲಕ್ಷಕ್ಕೆ ಜಾಮೀನಗಾಗಿ ಡೀಲ ನಡೆದಿತ್ತು.
ಈ ಹಿನ್ನಲೆಯಿಂದ ಹಣ ಪಡೆಯುವಾಗ ಧಾರವಾಡ ಲೋಕಾಯುಕ್ತ ಎಸ.ಪಿ.ಸತೀಶ ಚಿಟಗುಬ್ಬಿ ನೇತೃತ್ವದಲ್ಲಿ ಅಜೀಜ್ ಕಲಾದಾಗಿ ತನಿಖಾಧಿಕಾರಿ ದಾಳಿ ನಡೆಸಿ ನಗದು ಹಣ ಮತ್ತು ಪಿ.ಎಸ್.ಐ.ಜೊತೆ ತನಿಖೆ ಮುಂದುವರೆಸಿದ್ದಾರೆ.