ಕೈ ಅಭ್ಯರ್ಥಿ ಜಿ.ಎಸ್.ಪಾಟೀಲಯಿಂದ ಎ.ಪಿ.ಎಮ್.ಸಿ.ಯಲ್ಲಿ ಮತಯಾಚನೆ

ಸಮಗ್ರ ಪ್ರಭ ಸುದ್ದಿ
1 Min Read

ಗಜೇಂದ್ರಗಡ: ರಾಜ್ಯ ವಿಧಾನಸಭಾ ಚುನಾವಣೆಯು ಕೆಲ ದಿನಗಳು ಬಾಕಿಯಿರುವ ಹಿನ್ನಲೆಯಲ್ಲಿ ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ರಾಜಕಾರಣವು ದಿನದಿಂದ ದಿನಕ್ಕೆ ರಂಗೆರುತ್ತಿದ್ದು.

ಈ ಹಿನ್ನಲೆಯಲ್ಲಿ ರೋಣ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್ ಗಜೇಂದ್ರಗಡ ನಗರದ ಎಪಿಎಂಸಿ ವರ್ತಕರು ದಲ್ಲಾಳಿಗಳು ಹಾಗೂ ದುಡಿಯುವ ವರ್ಗದವರಿಗೆ ಈ ಬಾರಿ ನನಗೆ ಬೆಂಬಲ ಸೂಚಿಸುವಂತೆ ಚುನಾವಣಾ ಪ್ರಚಾರ ಕೈಗೊಂಡರು.

ಬಳಿಕ ಮಾತನಾಡಿ ಕಳೆದ ಮೂರು ಚುನಾವಣೆಯಲ್ಲಿಯೂ ಕೂಡ ನನಗೆ ಪರೋಕ್ಷವಾಗಿ ಎಪಿಎಂಸಿಯಲ್ಲಿನ ವರ್ತಕರು ಸಹಾಯ ಮಾಡಿದ್ದಾರೆ ಅದರಂತೆ ಈ ಬಾರಿಯೂ ಕೂಡ ತಮ್ಮೆಲ್ಲರ ಸಹಕಾರ ಆಶೀರ್ವಾದ ನನ್ನ ಮೇಲೆ ಇರಲಿ ಎಂದರು.

ಬಳಿಕ ಸಿದ್ದಪ್ಪ ಬಂಡಿ ಮಾತನಾಡಿ ಕಳೆದ ಚುನಾವಣೆಯಲ್ಲಿಯೂ ಕೂಡ ನಾವು ಯೋಗ್ಯರನ್ನ ಆರಿಸುವಲ್ಲಿ ಎಡವಿದ್ದೇವೆ ಆದರೆ ಈ ಬಾರಿ ಸಿಎಸ್ ಪಾಟೀಲರನ್ನು ವಿಧಾನಸಭೆಗೆ ಕಳುಹಿಸುವ ಮೂಲಕ ಎಪಿಎಂಸಿಯಲ್ಲಿನ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಜಿ ಎಸ್ ಪಾಟೀಲರನ್ನು ಬೆಂಬಲಿಸೋಣ ಎಂದರು.

ಇದೇ ಸಂದರ್ಭದಲ್ಲಿ ಪವಡಪ್ಪ ಮ್ಯಾಗೇರಿ, ವೀರಣ್ಣ ಶೆಟ್ಟರ, ಜಗದೀಶ್ ಕಲ್ಗುಡಿ, ಬಸವರಾಜ ಪುರ್ತಗೇರಿ, ಅಶೋಕ ಭಾಗಮಾರ,ಮಂಜುಳಾ ರೇವಡಿ,ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ, ರಾಜೂ ಸಾಂಗ್ಲೀಕರ್, ರವಿ ಗಡೇದವರ, ಯಲ್ಲಪ್ಪ ಬಂಕದ, ಪ್ರಶಾಂತ ಪಾಟೀಲ, ಅಕ್ಷಯ ಬಂಡಿ, ರಾಕೇಶ ಮಾರನಬಸರಿ, ಬಸವರಾಜ ರೇವಡಿ, ರಿಯಾಜ್ ವಂಟಿ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಅನೇಕರು ಇದ್ದರು.

Share this Article