ಜನರಿಗೆ ನೀರು ಕೊಡದೆ ಹೋರಾಟ ಮಾಡಿದವರಿಗೆ ಕಾಯಂ ಮನೆಯಲ್ಲಿ ಕೂರುವಂತೆ ಮಾಡಿ; ಕಳಕಪ್ಪ ಬಂಡಿ

ಸಮಗ್ರ ಪ್ರಭ ಸುದ್ದಿ
2 Min Read

ಗಜೇಂದ್ರಗಡ:ನನ್ನ ಕಳೆದ ಅವಧಿಯಲ್ಲಿ ನಾನು ರೋಣ ವಿಧಾನಸಭಾ ಮತಕ್ಷೇತ್ರದ ಜನರಿಗೆ ನದಿಯ ನೀರನ್ನು ತರಬೇಕು ಎಂದು ಮಹದಾಕಾಂಕ್ಷೆ ಇಟ್ಟುಕೊಂಡಾಗ ಜಿಗಳೂರು ಸಮೀಪ ಸುಮಾರು ನೂರಾರು ಎಕರೆ ಜಾಗವನ್ನು ಖರೀದಿ ಮಾಡಿ ಈ ಭಾಗದ ಜನರಿಗೆ ನೀರು ಸಮರ್ಪಕವಾಗಿ ನೀಡಬೇಕು ಎಂದು ಯೋಜನೆ ರೂಪಿಸಿದೆ ಆದರೆ ಯೋಜನೆಯು ಕೆಲ ತಾಂತ್ರಿಕ ಕಾರಣಗಳಿಂದ ಆಂದಿನ ದಿನದಲ್ಲೇ ಕೈಬಿಟ್ಟಿತ್ತು. ಪಟ್ಟು ಬಿಡದ ನಾನು ಮತ್ತೆ ಅಧಿಕಾರಕ್ಕೆ ಬಂದಾಗ ಜಿಗಳೂರು ಕೆರೆಯನ್ನ ಪೂರ್ಣಗೊಳಿಸಿ ಈಗ ನಿಮ್ಮ ಮನೆ ಮನೆಗೆ ಸಿಹಿ ನೀರನ್ನ ನೀಡುವಲ್ಲಿ ಯಶಸ್ವಿಯಾಗಿದ್ದೇನೆ ಆದರೆ ಕಾಂಗ್ರೆಸ್ ನವರು ಜಿಗಳೂರು ಕೆರೆ ನೀರನ್ನ ನೀಡಬೇಕಾದರೆ ಜನರಿಗೆ ನೀರು ಕೊಡಬೇಡ ಅಂತ ಹೇಳಿ ರೋಣ ಹಾಗೂ ಗಜೇಂದ್ರಗಡದಲ್ಲಿ ಹೋರಾಟ ಮಾಡ್ತಾರೆ. ಇಂಥವರನ್ನ ಕಾಯಂ ಮನೆಯಲ್ಲೇ ಕೂರಿಸುವಂತೆ ಜನರು ತಕ್ಕ ಪಾಠ ಕಲಿಸಬೇಕು ಎಂದು ರೋಣ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಹೇಳಿದರು.

ಗಜೇಂದ್ರಗಡ ನಗರದ ಹಿರೇ ಬಜಾರದಲ್ಲಿ ಬಿಜೆಪಿಯ ಶಕ್ತಿ ಕೇಂದ್ರದಿಂದ ನಡೆದ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಪಕ್ಷ ಒಡೆದಾಗ ಮಾತ್ರ ರೋಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.ಆದರೆ ಈ ಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ‌ಯಲ್ಲಿ ಯಾವುದೇ ಒಡಕು ಇಲ್ಲ ಒಗ್ಗಟ್ಟಿನ ಮಂತ್ರದಲ್ಲಿ ನಾವಿದ್ದೇವೆ ಈ ಬಾರಿ ನನ್ನ ಗೆಲುವು ಖಚಿತ.ರಾಜ್ಯ ಬಿಜೆಪಿ ಸಮಾಜದ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದೆ ‌. ದೇಶದ ಬೆನ್ನಲುಬು ಕೃಷಿಕರು, ಕಾರ್ಮಿಕರು, ಉದ್ಯಮಿಗಳು, ಮಹಿಳೆಯರು ಹೀಗೆ ಎಲ್ಲರಿಗಾಗಿ ಸರ್ಕಾರ ಕೆಲಸ ಮಾಡಿದೆ, ಆದ್ದರಿಂದ ಬಿಜೆಪಿ ಎಂದರೆ ಭರವಸೆಯಾಗಿದೆ. ಈ ಬಾರಿ ನನ್ನನ್ನು ಬೆಂಬಲಿಸಿ, ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇನ್ನಷ್ಟು ಶೈಕ್ಷಣಿಕವಾಗಿ, ವಾಣಿಜ್ಯಾತ್ಮಕ ಅಭಿವೃದ್ಧಿ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಅಭಿಮಾನವನ್ನು ನಾನು ಎಂದಿಗೂ ಮರೆಯಲಾರೆ. ಎಲ್ಲೆಡೆ ಹೋದರೂ ನನಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕ್ಷೇತ್ರದ ಸಾಕಷ್ಟು ಮುಖಂಡರು ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ನನ್ನ ಬಲ ಇನ್ನೂ ಹೆಚ್ಚಾಗಿದೆ. ಈ ಬಾರಿ ನನ್ನ ಗೆಲುವು ನಿಶ್ಚಿತವಾಗಬೇಕಾದರೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಹಾಕಿಸುವ ಮೂಲಕ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸಬೇಕು ಎಂದರು.

ಬಳಿಕ ಬಿಜೆಪಿ ರೋಣ ಮಂಡಳದ ಅಧ್ಯಕ್ಷ ಮುತ್ತಣ್ಣ ಕಡಗದ, ಅಶೋಕ ವನ್ನಾಲ, ಮಾತನಾಡಿ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರದ ಸಾಧನೆ ಕುರಿತು ಜನತೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕಾಂಗ್ರೆಸ್ ಹಂಚುತ್ತಿರುವ ಗ್ಯಾರಂಟಿ ಕಾರ್ಡ್ ಬೋಗಸ್‌ ಕಾರ್ಡ್ ನಮ್ಮ ಶಾಸಕರು ಶೈಕ್ಷಣಿಕವಾಗಿ ಅನೇಕ ಶಾಲಾ ಕಾಲೇಜುಗಳನ್ನು ಮಂಜೂರು ಮಾಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬಿ.ಎಮ್.ಸಜ್ಜನರ, ಡಾ.ಬಿ.ವ್ಹಿ.ಕಂಬಳ್ಯಾಳ ಜಗದೀಶ ಸಕ್ರಿ ಉಮೇಶ ಮಲ್ಲಾಪೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಾಸ್ಕರ ರಾಯಬಾಗಿ, ಎಸ್.ಎಸ್.ವಾಲಿ,ಅಂದಪ್ಪ ಸಂಕನೂರ, ಕರಣ ಬಂಡಿ, ಶಿವಾನಂದ ಮಂಠದ, ಗಿರೀಶ ಕುಲಕರ್ಣಿ, ಶಿವಾನಂದ ಅರಳಿ, ಸುನೀಲ ಸಕ್ರಿ, ವಿನಾಯಕ ಜಾಧವ, ನವೀನ ಹೊನವಾಡ, ವಿರೇಶ ನಂದಿಹಾಳ, ಅಮರೇಶ ಬಳಿಗೇರ, ರವಿಕುಮಾರ ದಿವಾಣದ, ಗಣೇಶ ದಿವಾಣದ, ಪರಶುರಾಮ ಗುಳೇದ, ಬಾಳನಗೌಡ ಗೌಡರ‌,‌ಅನುರಾಗ ಚಿನಿವಾಲರ, ಸೇರಿದಂತೆ ಅನೇಕರು ಇದ್ದರು.

Share this Article