ಗಜೇಂದ್ರಗಡ: ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ದುರಾಡಳಿತವನ್ನು ಜನ ನೋಡಿ ಬೇಸತ್ತಿದ್ದು, ಬಡವರ, ದೀನ ದಲಿತರ ಪರವಾಗಿರುವ ನಮ್ಮ ನಾಯಕ ಅರವಿಂದ್ ಕೇಜಿವಾಲ್ ಅವರ ಆಮ್ ಆದ್ಮ ಪಕ್ಷಕ್ಕೆ ಜನರು ಒಲವು ತೋರಿಸುತ್ತಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದಲ್ಲಿ ಜನತೆ ಬದಲಾವಣೆ ಕೇಳುತ್ತಿದ್ದಾರೆ. ಆದ್ದರಿಂದ ನನ್ನ ಗೆಲುವು ಖಚಿತ ಎಂದು ರೋಣ ವಿಧಾನಸಭಾ ಕ್ಷೇತ್ರದ ಆಮ್ ಆದಿ ಪಕ್ಷದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಹೇಳಿದರು.
ತಾಲೂಕಿನ ವಿವಿಧೆಡೆ ಮನೆ ಮನೆಗೆ ತೆರಳಿ ಮತ ಯಾಚನೆ ಕೈಗೊಂಡು ಮಾತನಾಡಿದರು.
ದೆಹಲಿಯಲ್ಲಿ ಕೇಜಿವಾಲ್ ಅವರ ಅಭಿವೃದ್ಧಿ ಕಾರ್ಯ ನೋಡಿದ ಜನತೆ ನಮ್ಮ ಪಕ್ಷಕ್ಕೆ ಮತ ನೀಡಲು ಮುಂದಾಗಿದ್ದಾರೆ. ತಾಲೂಕನ್ನು ಮಾದರಿ ತಾಲೂಕನ್ನಾಗಿಸಬೇಕೆನ್ನುವುದೇ ನನ್ನ ಗುರಿ ಎಂದರು.
ಬಳಿಕ ಆಪ್ ಮುಖಂಡ ಶರಣಪ್ಪ ದೊಣ್ಣೆಗುಡ್ಡ ಮಾತನಾಡಿ ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ನಾನೊಮ್ಮೆ ನೀನೊಮ್ಮೆ ಎನ್ನುವಂತೆ ಆಡಳಿತವನ್ನು ಮನಸೊಇಚ್ಚೆಯಂತೆ ನಡೆಸಿದ್ದಾರೆ.ಇದಕ್ಕೆ ಜನತೆಯು ಬೇಸತ್ತು ಹೊಸ ಮುಖಗಳ ಆಡಳಿತ ಬಯಸಿದ್ದಾರೆ.ರೋಣದಲ್ಲಿ ಬದಲಾವಣೆ ಆಗಬೇಕಾದರೆ ಆಪ್ ಪಕ್ಷವನ್ನು ಬೆಂಬಲಿಸಬೇಕಾಗಿದೆ ಎಂದರು.
ಪ್ರಚಾರ ಕಾರ್ಯಕ್ರಮದಲ್ಲಿ ಎಎಪಿ ಮುಖಂಡರಾದ ಶರಣಪ್ಪ ಡೊಣೆಗುಡ್ಡ, ಕಳಕನಗೌಡ ಗೌಡ್ರ, ಶರಣಪ್ಪ ತಳವಾರ, ಶರಣು ಡೊಳ್ಳಿನ, ಶರಣಪ್ಪ ಚಿಲಝರಿ, ಪ್ರಕಾಶ ಭಜೆಮ್ಮನವರ, ಬಸವರಾಜ್ ಗದಗಿನ, ಅನಿಲ್ ಕರ್ನೆ, ಸುಮಂತ್ ಹಾರೋಗೇರಿ, ಉಮೇಶ್ ಮುಗಳಿ, ಚಂದ್ರು ಪಾಟೀಲ್, ಹುಸೇನ್ ಸಾಬ್ ಸಂಕನೂರ, ಮಲ್ಲಪ್ಪ ಕೊಪ್ಪದ, ಸೇರಿದಂತೆ ಅನೇಕರು ಇದ್ದರು.