
ಗದಗ: ನಹರದ ಕೆ ವಿ ಹಂಚಿನಾಳ ಕಾಲೇಜ್ ಆಫ್ ನರ್ಸಿಂಗನಲ್ಲಿ ಶುಕ್ರವಾರ ಲ್ಯಾಂಪ್ ಲೈಟಿಂಗ್ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮವು ಕಲ್ಲಯ್ಯಜ್ಜನವರ ಅಮೃತ ಹಸ್ತದಿಂದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ರಾಮಕೃಷ್ಣ ಆಶ್ರಮದ
ಅದ್ವೈತ್ತ್ಯ ಪುನೀತ ಮಹಾರಾಜರು ದೀಪ ಬೆಳಗಿಸುವುದು ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು “ಫ್ಲಾರೆನ್ಸ್ ನೈಟಿಂಗೇಲ್ – ದಿ ಲೇಡಿ ವಿತ್ ದಿ ಲ್ಯಾಂಪ್” ಗೆ ಗೌರವವಾಗಿದೆ. ಈ ಸಮಾರಂಭವು ವಿದ್ಯಾರ್ಥಿಗಳನ್ನು ನರ್ಸಿಂಗ್‌ನ ಉದಾತ್ತ ವೃತ್ತಿಗೆ ಪ್ರಾರಂಭಿಸುತ್ತದೆ. ದೀಪ ಬೆಳಗುವಿಕೆಯು ಈ ಯುವ ವಿದ್ಯಾರ್ಥಿಗಳ ದೃಢ ನಿರ್ಧಾರವನ್ನು ಸೂಚಿಸುತ್ತದೆ, ಅನಾರೋಗ್ಯ ಮತ್ತು ಗಾಯಗೊಂಡ ವ್ಯಕ್ತಿಗಳನ್ನು ಕಾಳಜಿ ವಹಿಸಲು ತರಬೇತಿ ನೀಡಲಾಗುತ್ತದೆ. ದೀಪವನ್ನು ಬೆಳಗಿಸುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ ಮತ್ತು ನರ್ಸಿಂಗ್ ಮನೋಭಾವದ ವರ್ಗಾವಣೆಯನ್ನು ಸಂಕೇತಿಸುತ್ತದೆ. ದೀಪ ಬೆಳಗಿಸುವ ಸಮಾರಂಭವು ವಿದ್ಯಾರ್ಥಿಯ ನರ್ಸಿಂಗ್ ವೃತ್ತಿಗೆ ಪ್ರವೇಶವನ್ನು ಔಪಚಾರಿಕವಾಗಿ ಘೋಷಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ವಿ ಹಂಚಿನಾಳ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಡಾ|| ಎನ್ ಎಸ್ ಬಿರಾದರ ಹಿರಿಯ ವೈದ್ಯರು ಗದಗ ಹಾಗೂ, ಶಿವನಗೌಡ ಮಾಲಗೌಡರ ಪ್ರಾಂಶುಪಾಲರು ಸರ್ಕಾರಿ ನರ್ಸಿಂಗ ಕಾಲೇಜು,ಡಾ|| ವೀರೇಶ ಹಂಚಿನಾಳ ಇವರುಗಳು ವಹಿಸಿದ್ದರು ಅನುಪ ಕುಮಾರ ಹಂಚಿನಾಳ, ಡಾ|| ಸಂಜೀವ ಕಕ್ಕರೆಡ್ಡಿ, ಶಿವರಾಜ ಅಣ್ಣಿಗೇರಿ , ಸಚಿನ ಭೂಸದ, ಜಯದೇವ ಮೆಣಸಗಿ, ಕೈಲಾಶ ಹಿರೇಮಠ, ಲಕ್ಷ್ಮಿಕಾಂತ್ ಹಾಗೂ ವೀರೇಶ ಸಜ್ಜನ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪ್ರೋ ವೇದಶ್ರೀ ನಡೆಸಿಕೊಟ್ಟರು ಸುಧಾ ವಂದನಾರ್ಪಣೆ ಗೈದರು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದ ಹಾಜರಿದ್ದರು.

