ಚಿಕ್ಕ ಉದ್ದಿಮೆದಾರರು ಹಾಗೂ ವ್ಯಾಪಾರಸ್ಥರಿಗೆ ಉತ್ತೇಜನ ನೀಡುತ್ತೇವೆ : ರಾಹುಲ್ ಗಾಂಧಿ 

ಸಮಗ್ರ ಪ್ರಭ ಸುದ್ದಿ
4 Min Read

ಗದಗ; ಸಂವಿಧಾನ ಮಾತ್ರ ಅಪಾಯದಲ್ಲಿಲ್ಲ, ಸಂವಿಧಾನದ ರಕ್ಷಣೆಗೆ ಮುಂದಾಗಿರವ ಸಂಘಟನೆಗಳೂ ಅಪಾಯದಲ್ಲಿವೆ ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಿಸಲು ಬದ್ಧವಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದರು.
ಗದಗ ಇಂಡಸ್ಟ್ರೀಯಲ್ ಎಸ್ಟೇಟಿನ ತಿರಂಗಾ ಪಾರ್ಕದಲ್ಲಿ ಏರ್ಪಟ್ಟ ಯುವಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಯುವಕ ಅವಿನಾಶ ಬಳ್ಳಾರಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಆರ್‍ಎಸ್‍ಎಸ್ ಬ್ರಿಟೀಷರು ಹಾಗೂ ಸಂಸ್ಥಾನಗಳ ಪರವಾಗಿ ಇತ್ತು. ಜನರ ಜೊತೆ ಇರಲಿಲ್ಲ. ಸ್ವಾತಂತ್ರ್ಯ ಬಂದನಂತರ ಸಂವಿಧಾನ ರಚನೆ ಕಾಲಕ್ಕೂ ಈ ಸಂಘಟನೆ ಜನತೆ ಪರ ಇರಲಿಲ್ಲ. ಈಗಲೂ ಅದು ಜನತೆ ಜೊತೆ ಇಲ್ಲ. ಶ್ರೀಮಂತ ಉದ್ಯಿಮೆದಾರರ ಜೊತೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಗುಲಾಮಗಿರಿ ವ್ಯವಸ್ಥೆಯನ್ನು ಪುನಃ ತರಲು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಪ್ರಯತ್ನಿಸುತ್ತಿವೆ ಎಂದರು.
ಬಿಜೆಪಿ ಧರ್ಮದ ಬಗ್ಗೆ ಮಾತನಾಡುತ್ತದೆ ಹೊರತು, ಧರ್ಮ ಪಾಲಿಸುತ್ತಿಲ್ಲ ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡಲು ಧರ್ಮ ಬಳಿಕೆ ಮಾಡಿಕೊಳ್ಳುತ್ತಿದೆ ಎಂದರು. ಇದು ಜನರಿಗೆ ಗೊತ್ತಾಗಿದೆ.
ಸಂವಾದ ಕಾಲಕ್ಕೆ ಪ್ರಸಕ್ತ ರಾಜ್ಯ ಸರಕಾರ ಮೀಸಲಾತಿ ಬಗ್ಗೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಪಕ್ಷ ಎಲ್ಲರಿಗೂ ನ್ಯಾಯ ದೊರಕಿಸಲು ಸರಿಸಮಾನ ಹಕ್ಕು ನೀಡಲು ಬದ್ಧವಾಗಿದೆ ಬಿಜೆಪಿಗೆ ಸಾಮಾಜಿಕ ನ್ಯಾಯದ ಮೇಲೆ ವಿಶ್ವಾಸವಿಲ್ಲ. ಯುಪಿಎ ಸರಕಾರ ಇದ್ದಾಗ, ಜಾತಿ ಜನಗಣತಿ ಮಾಡಲಾಗಿತ್ತು ಅದನ್ನು ಬಿಡುಗಡೆ ಮಾಡಲಿ ಎಂದರು.

 


ಈಗ ನಾವು ಮಾರುಕಟ್ಟೆಯಲ್ಲಿ ಕೊಳ್ಳುವ ಮೊಬೈಲ್ ಸೇರಿ ಇಲೆಕ್ಟ್ರಾನಿಕ್ ವಸ್ತುಗಳ ಹಿಂದೆ ಮೇಡ ಇನ್ ಚೈನಾ ಎಂದು ಬರೆದಿರುತ್ತದೆ ಯಾಕೆ? ಮೇಡ ಇನ್ ಇಂಡಿಯಾ ಆಗುವುದಿಲ್ಲವೇ? ಎಂದು ಪ್ರಶ್ನಿಸಿ ಕೆಲವೇ ಶ್ರೀಮಂತ ಉದ್ಯಿಮೆದಾರರ ರಕ್ಷಣೆಗೆ ನಿಂತಿದೆ, ಮೇಡ ಇನ್ ಇಂಡಿಯಾ, ಮೇಡ ಇನ್ ಕರ್ನಾಟಕ ಆದಾಗ ಬದಲಾವಣೆ ಬರುತ್ತದೆ ಎಂದು ಹೇಳಿದರು.
ಬೆಲೆ ಏರಿಕೆ ಜನರ ಬದುಕನ್ನೇ ಕಸಿದಿದೆ. ಪೆಟ್ರೋಲ್, ಡಿಸೈಲ್ ಬೆಲೆ ಏರಿದೆ. ನಿರುದ್ಯೋಗವು ದೇಶದಲ್ಲಿ ತಾಂಡವವಾಡುತ್ತಿದೆ. ಕಳೆದ 40 ವರ್ಷಗಳಲ್ಲಿಯೇ ಅತೀ ಹೆಚ್ಚು ನಿರುದ್ಯೋಗ, ಈಗ ಇದೆ. ಪ್ರಧಾನ ಮಂತ್ರಿಗಳು ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇನೆ ಎಂದು ಹೇಳಿದ್ದರು. ಬದಲಾಗಿ, ನಿರುದ್ಯೋಗ ಹೆಚ್ಚಿದೆ. ಜಿಎಸ್‍ಟಿ ಜಾರಿ ತಂದು ಚಿಕ್ಕ ಮತ್ತು ಮದ್ಯಮ ಉದ್ಯಿಮೆಗಳನ್ನು ಹಾಗೂ ವ್ಯಾಪಾರಗಳನ್ನು ನಾಶ ಮಾಡಿದೆ. ಈಗ ಇಡೀ ದೇಶದ ಸಂಪತ್ತು ಕೆಲವೇ ಕೆಲವು ಉದ್ಯಿಮೆದಾರರ ಪಾಲಾಗಿದೆ ಎಂದರು.
ನಾನು ಸ್ವಾತಂತ್ರ್ಯಗೋಸ್ಕರ ಹೋರಾಡಿದ ಕುಟುಂಬದಿಂದ ಬಂದವನಾಗಿದ್ದೇನೆ. ನಾನು ಸತ್ಯದ ಪರವಾಗಿದ್ದೇನೆ, ನನ್ನ ತಾತ, ಅಜ್ಜಿ, ನನ್ನ ತಾಯಿ, ತಂದೆ ಇದನ್ನೇ ನನಗೆ ಬಳುವಳಿಯಾಗಿ ನೀಡಿದ್ದಾರೆ. ವಿರೋಧಿಗಳು ಏನೇ ಟೀಕೇ ಮಾಡಿದರೂ ನನಗೆ ಶಕ್ತಿ ಬರುತ್ತದೆ. ಈ ದೇಶ ನನಗೆ ಪ್ರೀತಿ, ವಿಶ್ವಾಸ ನೀಡಿದೆ. ದೇಶದ ರಕ್ಷಣೆಗೆ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ನಾನು ಸತ್ಯದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರಿಂದ ಸದಸ್ಯತ್ವ ರದ್ದುಗೊಳಿಸಿದರು. ಸರಕಾರಿ ಬಂಗಲೆಯಿಂದ ಹೊರ ಹಾಕಿದರು. ನಾನು ಧೃತಿಗೆಟ್ಟಿಲ್ಲ ಇವರೆಲ್ಲರನ್ನು ಎದುರಿಸಲು ನನಗೆ ಮತ್ತಷ್ಟು ಧೈರ್ಯ ಬಂದಿದೆ ಎಂದು ಪ್ರಶ್ನಾವಳಿಯೊಂದಕ್ಕೆ ಉತ್ತರಿಸಿದರು.
ದಲಿತರು, ಶೋಷಿತರು, ಹಿಂದುಳಿದ ವರ್ಗಗಳು ಹಾಗೂ ಬುಡಕಟ್ಟು ಜನರು ಮತ್ತೆ ಗುಲಾಮಗಿರಿಗೆ ಒಳಗಾಗುವ ಆತಂಕವಿದೆ. ಡಾ|| ಬಾಬಾಸಾಹೇಬ ಅಂಬೇಡ್ಕರರು ಪ್ರತಿಯೊಬ್ಬ ನಾಗರಿಕನಿಗೆ ಹಕ್ಕು ಹಾಗೂ ಧ್ವನಿಯನ್ನು ನೀಡಿದ್ದಾರೆ. ಈಗ ಆ ಹಕ್ಕಿನ ಹರಣ ಹಾಗೂ ಧ್ವನಿ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಬೆಳಿಸಿ ಆ ಹಿಂದಿನ ಗತವೈಭವವನ್ನು ಮರಳಿ ತರಲಾಗುವುದು. ಚಿಕ್ಕ ಉದ್ಯಿಮೆದಾರರಿಗೆ ವ್ಯಾಪಾರಸ್ಥರಿಗೆ ಉತ್ತೇಜನ ನೀಡಲಾಗುವುದು. ಸಾಲ ಸೌಲಭ್ಯವನ್ನು ಒದಗಿಸಲಾಗುವುದು. ಗ್ರಾಮಗಳಲ್ಲಿ ರೈತರನ್ನು, ಕೃಷಿ ಕಾರ್ಮಿಕರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಆರಂಭದಲ್ಲಿ ಶಾಸಕ ಎಚ್ ಕೆ ಪಾಟೀಲರು ಸ್ವಾಗತಿಸಿ, ಗದುಗಿನ ಇತಿಹಾಸ ವಿವರಿಸಿದರು. ಶೈವ, ವೈಷ್ಣವ ಹಾಗೂ ಜುಮ್ಮಾ ಮಸೀದಿ ಒಂದೇ ಟ್ರಸ್ಟಿನಡಿಯಲ್ಲಿ ಕೆಲಸ ಮಾಡುತ್ತಾ ಸೌಹಾರ್ಧತೆಗೆ ದೇಶಕ್ಕೆ ಸಂದೇಶ ಕಳುಹಿಸಿದ ನಗರವಿದು. ಸಹಕಾರ ರಂಗದ ತೊಟ್ಟಿಲು ದೇಶದ ಮೊದಲ ಸಹಕಾರ ಸಂಸ್ಥೆ ಆರಂಭಿಸಿದ್ದು ಗದಗ ಸಮೀಪದ ಕಣಗಿನಹಾಳ ಗ್ರಾಮದ ಸಿದ್ಧನಗೌಡ ಪಾಟೀಲರು. ಸಂಗೀತದಲ್ಲಿ ಭಾರತ ರತ್ನ ಭೀಮಸೇನ ಜೋಶಿ ಹಾಗೂ ಡಾ|| ಪಂಡಿತ ಪುಟ್ಟರಾಜ ಗವಾಯಿಗಳನ್ನು ನೀಡಿದ ನೆಲವಿದು. ಹಾಕಿ, ಕ್ರೀಕೆಟನಲ್ಲಿ ರಾಷ್ಟ್ರಮಟ್ಟದಲ್ಲಿ ಆಟಗಾರರನ್ನು ನೀಡಿದೆ ಕ್ರಿಕೇಟನಲ್ಲಿ ಸುನೀಲ್ ಜೋಶಿಯವರನ್ನು ಹೆಸರಿಸಿದರು. ಸಂವಾದ ನಡೆಸಿದ ತಿರಂಗಾ ಪಾರ್ಕ ಬಗ್ಗೆ ಪ್ರಸ್ತಾಪಿಸಿ ಸಹಕಾರ ಕ್ಷೇತ್ರದಲ್ಲಿ ನೂರು ದಿನದಲ್ಲಿ ನೂರು ಉದ್ಯಿಮೆಗಳನ್ನು ಸ್ಥಾಪಿಸಿ ಉದ್ಯೋಗ ನೀಡಿದ ಸ್ಥಳ ಎಂದರು.

 


ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪಸಿಂಗ ಸುರ್ಜೇವಾಲಾ, ಕೆಪಿಸಿಸಿ ಉಪಾಧ್ಯಕ್ಷ ಡಿ ಆರ್ ಪಾಟೀಲ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ರೋಣ ಮತಕ್ಷೇತ್ರದ ಅಭ್ಯರ್ಥಿ, ಜಿ ಎಸ್ ಪಾಟೀಲ, ನರಗುಂದ ಮತಕ್ಷೇತ್ರದ ಅಭ್ಯರ್ಥಿ ಬಿ ಆರ್ ಯಾವಗಲ್ಲ್, ಶಿರಹಟ್ಟಿ ಮತಕ್ಷೇತ್ರದ ಅಭ್ಯರ್ಥಿ ಸುಜಾತಾ ದೊಡ್ಡಮನಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ ನಲ್‍ಪಾಡ, ಸೇರಿದಂತೆ ಸಾವಿರಾರು ಯುವಕರು ಹಾಜರಿದ್ದರು

 

Share this Article