ಶಿರಹಟ್ಟಿ ಕ್ಷೇತ್ರದ ನಾಮಪತ್ರ ಹಿಂಪಡೆದ ಬಳಿಕ ಶಾಸಕ ರಾಮಣ್ಣ ಲಮಾಣಿ ಕಾಲಿಗೆ ನಮಸ್ಕರಿಸಿದ ಬಿಜೆಪಿ ಅಭ್ಯರ್ಥಿ ಆಶೀರ್ವಾದ ಪಡೆದ ಚಂದ್ರು ಲಮಾಣಿ.
ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಮಣ್ಣ ಲಮಾಣಿ ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಆದಿಯಾಗಿ ಜಿಲ್ಲಾ ನಾಯಕರಿಂದ ಮನವೊಲಿಕೆ ನಂತರ ಸೋಮವಾರ ಕುಂದ್ರಳ್ಳಿ ಗ್ರಾಮದ ಅವರ ಮನೆಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿಗೆ ಮತ ನೀಡಿ ಎಂದು ನೆರೆದ ಕಾರ್ಯಕರ್ತರಿಗೆ ಹೇಳಿದರು.
ಕ್ಷೇತ್ರದಲ್ಲಿ ಓಡಾಡೋದಿಲ್ಲ ನನಗೆ ಬಹಳ ಬೇಜಾರಾಗಿದೆ
ನಾನು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಆದರೆ ನನ್ನ ಕಾರ್ಯಕರ್ತರನ್ನು ವಿಶ್ವಾಸ ತೆಗೆದುಕೊಂಡು ಗೆದ್ದು ಬಾ ಅಂತ ಹರಿಸಿದ ರಾಮಣ್ಣ ಲಮಾಣಿ ಚಂದ್ರು ಲಮಾಣಿಗೆ ಟಿಕೆಟ್ ಸಿಕ್ಕಿದೆ ಈ ಹಿಂದೆ ನಾನು 90 ಸಾವಿರ ಮತಗಳನ್ನ ಪಡೆದು ದೊಡ್ಡ ಮಟ್ಟದಲ್ಲಿ ಗೆಲವು ಸಾಧಿಸಿದ್ದೆ ಈಗ ಕಾಂಗ್ರೆಸ್ ನಲ್ಲಿ ಎರಡು ಬಣಗಳಾಗಿವೆ
ಹೀಗಾಗಿ ಅವರು 60 ಸಾವಿರ ಮತಗಳಲ್ಲಿ ಒಡೆದಾಡುತ್ತಿದ್ದಾರೆ ನೀನು ನಾನು ಪಡೆದಿದ್ದ 90 ಸಾವಿರ ಮತಗಳನ್ನ ಪಡೆದು 20 ಸಾವಿರ ಮತಗಳ ಅಂತರದಿಂದ ಗೆಲವು ಪಡೆದು ಬಾ ಅಂತ ಹರಿಸಿದ ರಾಮಣ್ಣ ಲಮಾಣಿ.